





KARNATAKA POWER TRANSMISSION CORPORATION LIMITED ASSOCIATION-659
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘ - 659
ಶ್ರೀ.ಕೆ.ಬಲರಾಮ್ ಅಧ್ಯಕ್ಷರು
ಶ್ರೀ.ಶಿವರಾಂ ಪ್ರಧಾನ ಕಾರ್ಯದರ್ಶಿ
ಉದ್ದೇಶಗಳು
ನೌಕರರಿಗೆ ಸೂಕ್ತವಾದ, ನ್ಯಾಯೋಚಿತವಾದ ಹಾಗೂ ಕೆಲಸದ ಹಾಗೂ ಜೀವನದ ಸ್ಥಿತಿಗತಿಗಳು ದೊರಕುವಂತೆ ಮಾಡುವುದು; ಶಾಂತಿಯುತ , ಕಾನೂನು ಸಮ್ಮತ ಹಾಗೂ ಸಂವಿಧಾನಾತ್ಮಕವಾದ ಎಲ್ಲ ವಿಧಾನಗಳ ಮೂಲಕ ಅವರು ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುವಂತೆ ಮಾಡುವುದು
ನೌಕರರಲ್ಲಿ ಸಹಬಾಳ್ವೆ ಹಾಗೂ ಸಹಕಾರ ಮನೋಬಾವ ಬೆಳೆಸುವುದು ಹಾಗೂ ಅವರ ಹಕ್ಕುಗಳ, ಹೊಣೆಗಾರಿಕೆಗಳ ಹಾಗೂ ದಾಯತ್ವಗಳ ಬಗ್ಗೆ ಸೂಕ್ತ ಅರಿವು ಮೂಡಿಸುವುದು
ಅನಾರೋಗ್ಯ ,ನಿರುದ್ಯೋಗ, ವೃದ್ದಾಪ್ಯ , ಅಪಘಾತ ಹಾಗೂ ಮರಣದ ಸಂದರ್ಭದಲ್ಲಿ ಹಾಗೂ ಕಾನೂನುಬದ್ಧ ಮುಷ್ಕರದ ಅವಧಿಯಲ್ಲಿ ಅಥವಾ ನಿಯೋಜಕರೊಡನೆ ವಿವಾದ ಉಂಟಾದ ಅವಧಿಯಲ್ಲಿ ಸಹ ನೌಕರರಿಗೆ ಸೂಕ್ತ ವ್ಯವಸ್ಥೆ ಮಾಡುವುದು ಹಾಗೂ ಪರಿಹಾರ ಒದಗಿಸುವುದು
ನೌಕರರಲ್ಲಿ ಮಿತವ್ಯಯ , ಸಹಕಾರ ಭಾವನೆಗಳನ್ನು ಬೆಳೆಸುವುದು ಮತ್ತು ಸಾಮಾಜಿಕ ವಿಮೆ ಮತ್ತು ಸಹಕಾರಿ ಸಂಘಗಳನ್ನು ಸಂಘಟಿಸುವುದು ಮತ್ತು ಇತರ ಕಲ್ಯಾಣ ಕ್ರಮಗಳನ್ನು ಕೈಗೊಳ್ಳುವುದು
ನೌಕರರ ಹಾಗೂ ಅವರ ಕುಟುಂಬದವರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಅಭಿವೃದ್ದಿಪಡಿಸುವುದಕ್ಕಾಗಿ ಅವಕಾಶಗಳನ್ನು ಒದಗಿಸುವುದು ಮತ್ತು ಶಾಲೆಗಳನ್ನು , ವಾಚನಾಲಯಗಳನ್ನು , ಗ್ರಂಥಾಲಯಗಳನ್ನು ನಡೆಸುವುದು, ಕ್ರೀಡೆಗಳನ್ನು, ಮನರಂಜನಾ ಚಟುವಟಿಕೆಗಳನ್ನು ಕೈಗೊಳ್ಳುವುದು.ಇವೇ ಮುಂತಾದ ಚಟುವಟಿಕೆಗಳನ್ನು ಕೈಗೊಂಡು ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು
ಇದೇ ಬಗೆಯ ಉದ್ದೇಶಗಳನ್ನು ಹೊಂದಿರುವ ನೌಕರರ ಸಂಘಗಳೊಡನೆ ಸಹಕರಿಸುವುದು ಹಾಗೂ ಸಹಭಾಗಿಯಾಗುವುದು
ಸಂಘದ ಸದಸ್ಯರ ಮತ್ತು ನಿಯೋಜಕರ (ಮಂಡಳಿಯ) ನಡುವಿನ ವಿವಾದಗಳನ್ನು ಇತ್ಯರ್ಥಪಡಿಸಲು ಪ್ರಯತ್ನಿಸುವುದು
ಮೇಲೆ ಹೇಳಿದ ಉದ್ದೇಶಗಳ ಸಾಧನೆಗಾಗಿ ಕೈಗೊಳ್ಳಬಹುದಾದವುಗಳೆಂದು ಪರಿಗಣಿಸಲಾದ ಎಲ್ಲ ಕಾನೂನುಬದ್ಧ ಚಟುವಟಿಕೆಗಳನ್ನು ಕೈಗೊಳ್ಳುವುದು.
KPTCL UNION REGISTERED UNDER 659
On my social networks, I talk about entrepreneurship, productivity, and personal development. I'll tell you everything I have done with my company and share the growth strategies that we use with our clients.





